ಬಿಡಿ ಬಿಡಿ ಚಿತ್ರ
1
ಹೆಜ್ಜೆ ಇಟ್ಟಿರುವುದು ಅದೇ ದಾರಿ
ಆದರೂ ಗೊತ್ತಿರದ ಬರಿ ಅರಳಿ ಕುಣಿವ ಉಲ್ಲಾಸ
ಕೆಂಪು ಮೋರೆಯು ಚಿಗಿವ ಹೊಳೆವ
ಮಂಜುಳನಾದ ಮಾಡುತ್ತಲೆ ಹರಿವ ಏಕಾಂತವಾಸ.
2
ತೊಡೆಸಂದಿಯಲ್ಲಿ ಮುಖ ತೂರಿ
ಎದೆ ಬಡಿತದ ಮರುದನಿ, ತುಡಿವ ಕಂಗಳ ಕಾತರ
ಎಲ್ಲಿಂದೆಲ್ಲಿಗೋ ಹುಡುಕು ನೋಟ
ಜತೆಗೆ ಸಿಕ್ಕರೆ ಜಪ್ಪಿಸಿ ಎಳೆದೊಯ್ಯುವಾತುರ
3
ಮುಟ್ಟಿದರೆ ಅದೇ ಮತ್ತೇನೂ ಅಲ್ಲ
ಚಿತ್ರವತ್ತಾಗಿ ನಿರೂಪಿಸಿ ವಿವರಿಸಬೇಕಾದ್ದಿಲ್ಲ
ಕಳಿತ ರಸಾನುಭವದ ಹಣ್ನು
ಉಗುರು ಬೆಚ್ಚನೆ ಬಿಸುಪಿನ ಆತ್ಮೀಯ ಚೆಲ್ಲು ಚೆಲ್ಲು
4
ಕುಳಿತಿರಲಿ ನಿಂತಿರಲಿ
ಹರಿವ ನೀರನು ತಡೆದರೂ ನಿಲ್ಲಿಸಲಾದೀತೆ?
ಗಂಟೆಯ ಬಡಿತ, ಹಕ್ಕಿಯ ಉಲಿತ
ಬೇಡವೆನಿಸಿದರೂ ಎಲ್ಲ ಬಿಡಿ ಬಿಡಿ ಚಿತ್ರ.
'ಬೆಳಗೆದ್ದು ನಿಂತರೆ' ಕವನ ಸಂಕಲನದಿಂದ
1
ಹೆಜ್ಜೆ ಇಟ್ಟಿರುವುದು ಅದೇ ದಾರಿ
ಆದರೂ ಗೊತ್ತಿರದ ಬರಿ ಅರಳಿ ಕುಣಿವ ಉಲ್ಲಾಸ
ಕೆಂಪು ಮೋರೆಯು ಚಿಗಿವ ಹೊಳೆವ
ಮಂಜುಳನಾದ ಮಾಡುತ್ತಲೆ ಹರಿವ ಏಕಾಂತವಾಸ.
2
ತೊಡೆಸಂದಿಯಲ್ಲಿ ಮುಖ ತೂರಿ
ಎದೆ ಬಡಿತದ ಮರುದನಿ, ತುಡಿವ ಕಂಗಳ ಕಾತರ
ಎಲ್ಲಿಂದೆಲ್ಲಿಗೋ ಹುಡುಕು ನೋಟ
ಜತೆಗೆ ಸಿಕ್ಕರೆ ಜಪ್ಪಿಸಿ ಎಳೆದೊಯ್ಯುವಾತುರ
3
ಮುಟ್ಟಿದರೆ ಅದೇ ಮತ್ತೇನೂ ಅಲ್ಲ
ಚಿತ್ರವತ್ತಾಗಿ ನಿರೂಪಿಸಿ ವಿವರಿಸಬೇಕಾದ್ದಿಲ್ಲ
ಕಳಿತ ರಸಾನುಭವದ ಹಣ್ನು
ಉಗುರು ಬೆಚ್ಚನೆ ಬಿಸುಪಿನ ಆತ್ಮೀಯ ಚೆಲ್ಲು ಚೆಲ್ಲು
4
ಕುಳಿತಿರಲಿ ನಿಂತಿರಲಿ
ಹರಿವ ನೀರನು ತಡೆದರೂ ನಿಲ್ಲಿಸಲಾದೀತೆ?
ಗಂಟೆಯ ಬಡಿತ, ಹಕ್ಕಿಯ ಉಲಿತ
ಬೇಡವೆನಿಸಿದರೂ ಎಲ್ಲ ಬಿಡಿ ಬಿಡಿ ಚಿತ್ರ.
'ಬೆಳಗೆದ್ದು ನಿಂತರೆ' ಕವನ ಸಂಕಲನದಿಂದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ