ಶನಿವಾರ, ಫೆಬ್ರವರಿ 12, 2011

ಜಾಣೆ ಏನೆ?


ಜಾಣೆ ಏನೆ?


ಹಾದು ಹೋದರೆ ಎದುರು ನೋಟ ನೆಟ್ಟು ನೋಡುತ
ಮುಖಕೆ ಮುಖ ಇಟ್ಟರೆ ಬೇರೆ ಕಡೆ ಗಮನಿಸುತ
ಎದುರು ಕುಳಿತೆ ಕರೆದರೂ ಗಂಟಲು ಕಟ್ಟಿ ಬರುತ
ಒಳಗೊಳಗೆ ಮಿಡುಕುವ ಹುಡುಗಿ, ಏನೆ ಇದು ಒಗರು?


ಕಾಲು ಇಟ್ಟರೆ ಒಳಗೆ ಕಣ್ಣ ಕುತೂಹಲ ಮೈದುಂಬಿ ನೋಡಿ
ದೊಗರು ಮಾತಿನ ಹುಡುಗಿ ನೀನೆ ಏನೇ ಎಂದು ಕೇಳುವ ಮೊದಲೆ
ಕಣ್ಣಿಗೆ ಕಿಡಿ ಹಚ್ಚಿ ಬಾಯಿಗೆ ಕಾಡಿಗೆ ಬಳಿದ ರುದ್ರ ನಟನೆ ಏನೆ?
ಅಡಿ ಇಟ್ಟ ನೆಲ ಕೂಡ ಕಸಿದು ಹಿಮ್ಮೆಟ್ಟಿಸುವ ಜಾಣೆ ಏನೆ?


ಪಾತ್ರೆ ತೊಳೆಯದ ಕೈ ಮಾಡುವ ಬಳೆ ಸದ್ದು
ಹಿಡಿದ ಕನ್ನಡಿಯ ರೂಪ ಬಲು ಮೆಚ್ಚಿಗೆಯದೆ?
ಬೆಡಗುತನ ತೋರದೆ ಬಿನ್ನಾಣವಡಗಿಸಿ ಕೂತು
ಬೆದರಿಸಿದರೆ ಬೆದರುವ ಮೊದ್ದುಮಣಿಯೆ ಈತ?


ನಿನ್ನಲ್ಲೇ ಹುದುಗಿಸಿಯೂ ಆರೋಪಿಸುವ ಹುಡುಗಿ
ಬೆಚ್ಚಿ ಒಪ್ಪುವನೆ ನಾನು? ದೂರ ನಿಲ್ಲವ ಕುಹಕನೆ?


'ಬೆಳಗೆದ್ದು ನಿಂತರೆ' ಕವನ ಸಂಕಲನದಿಂದ

ಕಾಮೆಂಟ್‌ಗಳಿಲ್ಲ: